ವಿಷ್ಣುವಿನ ಆಶೀರ್ವಾದವಿರುವ ತುಳಸಿ ಮಾಲೆ ಧರಿಸಿ ತಪ್ಪಿಯೂ ಈ ಕೆಲಸ ಮಾಡಬಾರದಂತೆ| lifestyle

Vijayavan

ವಿಷ್ಣುವಿನ ಆಶೀರ್ವಾದವಿರುವ ತುಳಸಿ ಮಾಲೆ ಧರಿಸಿ ತಪ್ಪಿಯೂ ಈ ಕೆಲಸ ಮಾಡಬಾರದಂತೆ| lifestyle

ಹಿಂದೂ ಧರ್ಮದಲ್ಲಿ ತುಳಸಿ ಮಾಲೆಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ನೀವು ತುಳಸಿ ಮಾಲೆಯನ್ನು ಧರಿಸಿದರೆ, ಈ ವಿಷಯಗಳಿಗೆ ವಿಶೇಷ ಗಮನ ನೀಡಬೇಕು, ಇಲ್ಲದಿದ್ದರೆ ನಿಮಗೆ ಕೆಲ ಸಮಸ್ಯೆಗಳು ಎದುರಾಗಲಿವೆಯಂತೆ.

ಗಂಗಾಜಲದಿಂದ ಶುದ್ದೀಕರಣ

ತುಳಸಿ ಮಾಲೆಯನ್ನು ಧರಿಸುವ ಮೊದಲು ಅದನ್ನು ಶುದ್ಧೀಕರಿಸಬೇಕು. ಮೊದಲು ಅದನ್ನು ಗಂಗಾ ನೀರಿನಿಂದ ಶುದ್ಧೀಕರಿಸಿ ಒಣಗಿದ ನಂತರವೇ ನಿಮ್ಮ ಕುತ್ತಿಗೆಗೆ ಧರಿಸಿ. ಗಂಗಾ ನೀರಿನಿಂದ ಶುದ್ಧೀಕರಣವು ಹಿಂದೂ ಧಾರ್ಮಿಕ ಸಂಪ್ರದಾಯಗಳಲ್ಲಿ ಪವಿತ್ರವಾದ ಕ್ರಿಯೆಯಾಗಿದೆ. ಏಕೆಂದರೆ ಗಂಗೆಯನ್ನು ದೇವತೆಯಾಗಿ ಪೂಜಿಸಲಾಗುತ್ತದೆ ಮತ್ತು ಇದು ಪಾಪವನ್ನು ತೊಡೆದುಹಾಕುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗುತ್ತದೆ.

ಅಪವಿತ್ರತೆಯಲ್ಲಿ ತೊಡಗುವುದು

ತುಳಸಿ ಮಾಲೆ ಧರಿಸಿರುವಾಗ ಶೌಚಾಲಯಕ್ಕೆ ಹೋಗುವುದು, ಅಶುದ್ಧ ಸ್ಥಳಗಳಿಗೆ ತೆರಳುವುದು ಅಥವಾ ಅಪವಿತ್ರ ಕಾರ್ಯಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಬೇಕು. ತುಳಸಿ ಮಾಲೆಯನ್ನು ಧರಿಸುವ ಮೊದಲು ಮತ್ತು ತೆಗೆದ ನಂತರ ಶುದ್ಧಿಯನ್ನು ಕಾಪಾಡಿಕೊಳ್ಳಬೇಕು.

ಮಾಂಸಾಹಾರ ಸೇವನೆ

ತುಳಸಿ ಮಾಲೆ ಧರಿಸುವವರು ಮಾಂಸಾಹಾರ, ಮದ್ಯಪಾನ, ಅಥವಾ ತಾಮಸಿಕ ಆಹಾರವನ್ನು ಸೇವಿಸಬಾರದು. ಇದು ವಿಷ್ಣುವಿನ ಭಕ್ತಿಗೆ ವಿರುದ್ಧವೆಂದು ಪರಿಗಣಿಸಲಾಗುತ್ತದೆ. ತುಳಸಿ ಮಾಲೆಯನ್ನು ಧರಿಸುವ ಮೊದಲು ವಿಷ್ಣುವಿಗೆ ಅರ್ಪಿಸಿ, ಪೂಜಿಸಿ, ಆಶೀರ್ವಾದ ಪಡೆದ ನಂತರವೇ ಧರಿಸಬೇಕು. ನೇರವಾಗಿ ಧರಿಸುವುದು ಸರಿಯಲ್ಲ